ಜಾನು 2012 ರ ಕನ್ನಡ ರೋಮ್ಯಾಂಟಿಕ್ ಆಕ್ಷನ್ ಚಿತ್ರವಾಗಿದ್ದು ಪ್ರೀತಂ ಗುಬ್ಬಿ ನಿರ್ದೇಶಿಸಿದ್ದು ಜಯಣ್ಣ ಕಂಬೈನ್ಸ್ ನಿರ್ಮಿಸಿದ್ದಾರೆ. ಯಶ್ ಮತ್ತು ದೀಪಾ ಸನ್ನಿಧಿ ನಾಯಕ ನಾಯಕಿಯಾಗಿದ್ದು, ರಂಗಾಯಣ ರಘು, ಸಾಧು ಕೋಕಿಲ, ಶೋಬರಾಜ್ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ವಿ.ಹರಿಕೃಷ್ಣ ಸಂಗೀತಸಂಯೋಜಕರು. ಈ ಚಲನಚಿತ್ರವು 1 ಜೂನ್ 2012 ರಂದು ಕರ್ನಾಟಕ ರಾಜ್ಯದಾದ್ಯಂತ ಬಿಡುಗಡೆಯಾಯಿತು. ಈ ಚಲನಚಿತ್ರವನ್ನು 2018 ರಲ್ಲಿ ಒಡಿಯಾದಲ್ಲಿ ಲವ್ ಎಕ್ಸ್‌ಪ್ರೆಸ್ ಎಂದು ರೀಮೇಕ್ ಮಾಡಲಾಯಿತು. == ಪಾತ್ರವರ್ಗ == ಸಿದ್ಧಾರ್ಥ್ ಪಾತ್ರದಲ್ಲಿ ಯಶ್ ಜಾನು ಪಾತ್ರದಲ್ಲಿ ದೀಪಾ ಸನ್ನಿಧಿ ರಂಗಾಯಣ ರಘು ಸಾಧು ಕೋಕಿಲ ಲಯ ಕೋಕಿಲಾ ಚಿಕ್ಕಣ್ಣ ಮಧು ಗುರುಸ್ವಾಮಿ ರಾಘವ ಉದಯ್ ಶೋಬರಾಜ್ ರಾಕ್‌ಲೈನ್ ಸುಧಾಕರ್ ರಾಜಶೇಖರ್ ನಾಯ್ಡು ಸಂಗೀತಾ ಎಂ ಎಸ್ ಉಮೇಶ್ ರವಿವರ್ಮ == ನಿರ್ಮಾಣ == ಹಾಗೆ ಸುಮ್ಮನೆ ಮತ್ತು ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ ನಂತರ, ಪ್ರೀತಂ ಗುಬ್ಬಿ ಹಿಂದಿನ ಚಿತ್ರಗಳಂತೆ ನಿರ್ಮಾಪಕರಾದ ಜಯಣ್ಣ ಕಂಬೈನ್ಸ್‌ನೊಂದಿಗೆ ಸೇರಿಕೊಂಡರು. == ಬಾಕ್ಸ್ ಆಫೀಸ್ ನಲ್ಲಿ == ಜಾನು ಬಹು ನಿರೀಕ್ಷಿತ ಚಿತ್ರವಾಗಿದ್ದು ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಆದರೆ ಚಿತ್ರವು ಬಿಡುಗಡೆಯಾದ ನಂತರ ಮಿಶ್ರ ಪ್ರತಿಕ್ರಿಯೆಯನ್ನು ಪಡೆಯಿತು, ಆದರೂ ಅದು 50 ದಿನಗಳ ಓಟವನ್ನು ಪೂರ್ಣಗೊಳಿಸುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ವಾಣಿಜ್ಯಿಕವಾಗಿ ಯಶಸ್ವಿಯಾಗಿದೆ. == ಧ್ವನಿಮುದ್ರಿಕೆ == ವಿ.ಹರಿಕೃಷ್ಣ ಚಿತ್ರದ ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದ್ದಾರೆ. ಆಲ್ಬಮ್ ಐದು ಹಾಡುಗಳನ್ನು ಒಳಗೊಂಡಿದೆ. ಹಾಡುಗಳಿಗೆ ಸಾಹಿತ್ಯವನ್ನು ಯೋಗರಾಜ್ ಭಟ್ ಮತ್ತು ಜಯಂತ್ ಕಾಯ್ಕಿಣಿ ಬರೆದಿದ್ದಾರೆ. ಆಲ್ಬಮ್ 13 ಮೇ 2012 ರಂದು ಬಿಡುಗಡೆಯಾಯಿತು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == @ ಐ ಎಮ್ ಡಿ ಬಿ